

18th July 2026

ಬೆಳಗಾವಿ ಸಿಟಿ ಟಾಪರ್ ಆಗಿ ಆಕಾಶ್ ಸಂಸ್ಥೆಯ ವಿದ್ಯಾರ್ಥಿ ರಾಘವೇಂದ್ರ ಜೋಶಿ ಸಾಧನೆ
ಬೆಳಗಾವಿ ಜುಲೈ 18,2026: ಪರೀಕ್ಷಾ ಸಿದ್ಧತಾ ಸೇವೆಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಆಕಾಶ್ ಎಜ್ಯುಕೇಶನಲ್ ಸರ್ವಿಸಸ್ ಲಿಮಿಟೆಡ್ (AESL) ಸಂಸ್ಥೆಯ ಬೆಳಗಾವಿ ಶಾಖೆಯ ವಿದ್ಯಾರ್ಥಿ ರಾಘವೇಂದ್ರ ಜೋಶಿ NEET UG 2026 ರ ಪರೀಕ್ಷೆಯಲ್ಲಿ 1268ನೇ ಆಲ್ ಇಂಡಿಯಾ ರ್ಯಾಂಕ್ (AIR) ಪಡೆಯುವ ಮೂಲಕ ಬೆಳಗಾವಿ ಸಿಟಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ತಮ್ಮ ಯಶಸ್ಸಿನ ಕುರಿತು ಮಾತನಾಡಿದ ರಾಘವೇಂದ್ರ ಜೋಶಿ, "AIR 1268 ರ್ಯಾಂಕ್ನೊಂದಿಗೆ ಸಿಟಿ ಟಾಪರ್ ಆಗಿರುವುದು ನನ್ನ ಕನಸಾಗಿತ್ತು. ನನ್ನ ಪೋಷಕರ ಬೆಂಬಲ ಹಾಗೂ ಆಕಾಶ್ ಸಂಸ್ಥೆಯ ಉಪನ್ಯಾಸಕರ ನಿರಂತರ ಮಾರ್ಗದರ್ಶನವೇ ಇದಕ್ಕೆ ಕಾರಣ. ಸಂಸ್ಥೆಯ ಮಾಕ್ ಟೆಸ್ಟ್ಗಳು, ಸಂದೇಹ ಪರಿಹಾರ ಸೆಶನ್ಗಳು ಮತ್ತು ಶಿಸ್ತುಬದ್ಧ ಕಲಿಕಾ ವಾತಾವರಣವು ನನ್ನ ಸಿದ್ಧತೆಗೆ ಭದ್ರ ಬುನಾದಿ ನೀಡಿತು," ಎಂದು ಕೃತಜ್ಞತೆ ಸಲ್ಲಿಸಿದರು.
AESL ನ ಅಕಾಡೆಮಿಕ್ಸ್ ಮತ್ತು ಬ್ಯುಸಿನೆಸ್ ಹೆಡ್ ಧೀರಜ್ ಕುಮಾರ್ ಮಿಶ್ರಾ ಮಾತನಾಡಿ, "ರಾಘವೇಂದ್ರ ಅವರ ಶಿಸ್ತು ಮತ್ತು ಸ್ಥಿರತೆಯ ಸಾಧನೆ ಇಡೀ ಆಕಾಶ್ ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ. ವಿದ್ಯಾರ್ಥಿ ಹಾಗೂ ಅವರ ಕುಟುಂಬಕ್ಕೆ ಅಭಿನಂದನೆಗಳು," ಎಂದರು.
ಈ ವರ್ಷ ರಾಷ್ಟ್ರಮಟ್ಟದಲ್ಲಿ ಆಕಾಶ್ ಸಂಸ್ಥೆಯ 4 ವಿದ್ಯಾರ್ಥಿಗಳು ಟಾಪ್ 10 ರಲ್ಲಿ ಹಾಗೂ 41 ವಿದ್ಯಾರ್ಥಿಗಳು ಟಾಪ್ 100 ರಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಇತರೆ ಸಾಧಕರಾದ ಜೋಹಾನ್ ಜಾಬ್ (AIR 69), ಕೆವಿನ್ (AIR 299), ಸಿದ್ದಾಂತ್ ವಿನಯ್ (AIR 579) ಮತ್ತು ಅಭಿರಾಮ್ ಎ.ಪಿ. (AIR 623) ಅತ್ಯುತ್ತಮ ರ್ಯಾಂಕ್ ಗಳಿಸಿದ್ದಾರೆ. ಪರಿಣತ ಉಪನ್ಯಾಸಕರು ಮತ್ತು AI-ಚಾಲಿತ ವಿಶ್ಲೇಷಣೆಯುಳ್ಳ ಸಮಗ್ರ ಕಲಿಕಾ ವ್ಯವಸ್ಥೆಯು ವಿದ್ಯಾರ್ಥಿಗಳ ಈ ಅಸಾಧಾರಣ ಯಶಸ್ಸಿಗೆ ಕಾರಣವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪತ್ರಿಕಾ ಗೋಷ್ಠಿಯಲ್ಲಿ ಅಶೀಫಾಲಿ ಅಂಗಡಿ - ಬ್ರಾಂಚ್ ಹೆಡ್ (ಶಾಖಾ ಮುಖ್ಯಸ್ಥರು)
ವಿಜಯಕುಮಾರ್ ಸಿ. ಎಚ್. - ಅಸಿಸ್ಟೆಂಟ್ ಡೈರೆಕ್ಟರ್ (ಸಹಾಯಕ ನಿರ್ದೇಶಕರು)
ಅನಿಲ್ ಕುಮಾರ್ ಎಚ್. ಆರ್.ಆರ್ ಎಸ್ ಜಿ ಎಚ್ ಉಪಸ್ಥಿತರಿದ್ದರು

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ

ಬರೀ ಪದವಿ ಸಾಲದು, ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಗಳಾಗಿ: ಯುವ ಇಂಜಿನಿಯರ್ಗಳಿಗೆ ಪತ್ರಕರ್ತ ಅಜಿತ್ ಹನಮಕ್ಕನವರ ಕರೆ